B M VARUN
ದೆಹಲಿಗೆ ಬಂದಾಗಿನಿಂದ ಕನ್ನಡದ ಸೊಗಡು ಹೊರಟುಹೋಗಿದೆ. ಕಾರಣ ನಾನು ಸ್ವತಃ ಎಲ್ಲರೊಂದಿಗೆ ಬೇರೆಯುವಿದಿಲ್ಲ. ಅದರಲ್ಲೂ ನಮ್ಮವರ ಹೊರನಾಟದಿಂದ ದೂರವಾಗಿ ಉಳಿಯಲು ಬಯಸುತ್ತೇನೆ. ಕಾರಣ ಅವರಾಡುವ ಭಾಷೆ.ನೀನು,ನಿಂದು,ನಿನಗೆ ಎಂದೆಲ್ಲ ಚಿಕ್ಕವರು ದೊಡ್ಡವರನ್ನು ಬೇಕಾಬಿಟ್ಟಿಸಂಭೋದಿಸುತ್ತಾರೆ; ನನಗದು ಹಿಡಿಸುವುದಿಲ್ಲ. ಸಂಸ್ಕಾರವೇ ಇಲ್ಲದಂತೆ ಭಾಷೆಯನ್ನಾಡುತ್ತಾರೆ.ಗೌರವ ಕೊಟ್ಟು ಗೌರವ ಪಡೆಯುವುದನ್ನೇ ತಿಳಿದಿಲ್ಲ. ಕಾಲೇಜು ದಿನಗಳಲ್ಲಿ ನಾನು ಸಂಭೋದನೆಯ ಮಹತ್ವ ನನ್ನ ಹಿರಿಯ ಗೆಳೆಯರಿಂದ ತಿಳಿದೇ. ಅಂದಿನಿದ ಅವರನ್ನು ಎಂದಿಗೂ ಏಕವಚನದಲ್ಲಿ ಮಾತನಾಡಿಸಿಲ್ಲ. ಅವರು ಸಹ ನನ್ನನ್ನು ನಮ್ಮ ಸಂಭಂದಕ್ಕೆ ತಕ್ಕಂತೆ ಮಾತನಾಡಿಸುತ್ತಾರೆ. ಇದರಿಂದಾಗಿ ಇಬ್ಬರಿಗೂ ಸಹ ಸ್ವಗೌರವ ಮತ್ತು ಅಭಿಮಾನ ಹೆಚ್ಚು. ಹಿರಿಯರನ್ನು, ಅವರ ಹಿರಿತನಕ್ಕೆ ಗೌರವಿಸುವುದನ್ನು ನಾನು ಆಶಿಸುತ್ತೇನೆ ಹಾಗು ಆಚರಿಸುತ್ತಿರುವೆ. ನಮ್ಮ ಕಾಲೇಜಿನ ಶಿಕ್ಷಕರು ನಮ್ಮನ್ನು ಎಂದಿಗೂ ಸಹ ಏಕವಚನದಿಂದ ಸಂಭೋದಿಸಿಲ್ಲ , ಅದೇ ರೂಡಿಯಾಗಿ ನಮ್ಮ ಗೆಳೆಯರಲ್ಲಿ ಬಂದಿದೆ.ಕಾಲೇಜಿಗೆ ಬರುವುದಕ್ಕೆ ಮುನ್ನ ನಾವುಗಳು ಬರಿ ಜವಾಬ್ದಾರಿ ಇಲ್ಲದ ಹುಡುಗರಷ್ಟೆ. ಆದರೆ ಕಾಲೇಜಿನಿಂದ ಹೊರಟಾಗ ವೃತ್ತಿಪರ ಪದವೀದರರು;ಭವ್ಯ ಭಾರತದ ಭಾವಿ ಪ್ರಜೆಗಳು.ಪದವಿಯಿಂದಾಗಿ ಸಮಾಜದಲ್ಲಿ , ಕಾಲೇಜಿನ ಹಾಗು ಶಿಕ್ಷಕರ ಗೌರವ ಎತ್ತಿಹಿಡಿಯುವ ಜವಾಬ್ದಾರಿ ಹೆಚ್ಚಾಗಿರುತ್ತದೆ. ಭಗವಂತನ ಆಶಿರ್ವಾದನಿಂದ ನನಗೆ ಕಾಲೇಜಿನಲ್ಲಿ ಬಹಳ ಪ್ರೇಮವುಳ್ಳ ಬ್ಬೋಧಕರು ದೊರೆತರು. ಅವರಿಂದ ಕಲಿತ ಆದರ್ಶ ಪಾಲಿಸುವಿದು ನನಗೆ ಸರಿಎನಿಸುವುದು. ಆದರೆ ಮಾತೃಭಾಷೆ ಪ್ರೇಮ ಸಹಜ ಆದರೆ ಅದರಿಂದಾಗಿ ನನ್ನ ಗೌರವ ಮತ್ತು ಸ್ವಾಭಿಮಾನಕ್ಕೆ ದಕ್ಕೆ ತರುವಂತಹ ಸ್ಥಿತಿಗೆ ಬೀಳುವುದನ್ನು ತಡೆಗಟ್ಟಲು ಮೌನವಾಗಿರುತ್ತೇನೆ.
ಭಾಷೆ ಇರುವುದು ಸಂಬೊದನೆಗೆ. ಜಗಳ ಆಡುವುದಕ್ಕಲ್ಲಾ. ಹರಟೆ ಹೊದೆಯುಯುದಕ್ಕಲಾ. ಭಾಷೆಯು ಜ್ಞಾನಕ್ಕೆ ಮಾಧ್ಯಮ.
ಯಾವುದೇ ಮೇಲಲ್ಲ-ಕೀಳಲ್ಲವೆಂದು ನನ್ನ ಅಭಿಪ್ರಾಯ. ಆದ್ದರಿಂದ ನಾನು ನನಗೆ ದೊರೆತ ಎಲ್ಲಾ ವರ್ಗದ, ಎಲ್ಲಾ ಭಾಷೆಯ ಜನರ ಸಂಪರ್ಕ ಪಡೆದು, ಹಲವಾರು ಭಾಷೆಗಳನ್ನೂ ಕಲಿತು , ಅವುಗಳಲ್ಲಿರುವ ವೈವಿದ್ಯತೆಯಲ್ಲಿರುವ ಏಕತೆಯನ್ನು ಕಂಡು ಸವಿದು ಉಂಡುತ್ತಿರುವೆ.ಇವುಗಳ ಮದ್ಯೆ ನಾನು ನನ್ನತನವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ.ಭಾಷಾಗೌರವಕ್ಕೆ ದಕ್ಕೆ ತಂದಿಲ್ಲ. ತರುವುದಿಲ್ಲ.
ವಿಶ್ವಮಾನವ ಸಂದೇಶವನ್ನು ಸಾರಿದ ಭಾಷೆ ನನ್ನದೆಮ್ಮ ಗರ್ವ. ವಿಶ್ವಭಾರತಿಯ ಹೆಮ್ಮೆಯ ಪುತ್ರಿ - ನಮ್ಮ ಕನ್ನಡ ಭಾಷೆ. ಆಕೆಗೆ ಇರುವುದು ತಾಯಿಯ ಹೋಲಿಕೆಯೇ ಬಹಳ. ಸರ್ವಧರ್ಮಗಳ ಸಮನ್ವಯ ನಾಡು. ನೆನೆದಾಗ ಮೈ ರೋಮಾಂಚನವಾಗುತ್ತದೆ.

ಒಬ್ಬನೇ ನನ್ನ ಯೋಚನಾಲಹರಿಯಲ್ಲಿ ತೆಲಾದುತ್ತಿರುವಾಗ ನನಗೆ ಹೊಳೆದದ್ದು ನಮ್ಮ ಬನವಾಸಿ ದೇಶ.....
ತಿಂದಾಗ ಕೂತಾಗ,ನಿಂತಾಗ, ನೆನೆದಾಗ -ಮನದ ಬಳಿಗೆ ಬರುವುದು ಕನ್ನಡ . ನಿದ್ದೆಯಲ್ಲೂ ನನ್ನ ಭಾಷೆ ಕನ್ನಡವೇ. ನಿದ್ದೆ ಮ೦ಪರಿನಲ್ಲು ನಾನು ಮಾತನಾಡುವುದು ಕನ್ನಡವನ್ನೇ. ಯೋಚಿಸುವುದೇ ಕನ್ನಡದಲ್ಲೇ. ಊಟವೆಂದು ನೆನಪಾದಾಗ ಹೊಳೆಯುವುದು ಬಸ್ಸಾರು-ಮಸೋಪ್ಪು ಸಾರುಗಳೇ.
ಬಿಸಿಭೇಳೆ ಭಾತನ್ನು, ಗಸಗಸೆ ಪಾಯಸವನ್ನು, ಕಡುಬನ್ನು, ಚಿಲ್ಳುಗರು ಬಾಳೆಹಣ್ಣನ್ನು,ಅವರೇಕಾಳು ಉಪ್ಪಿಟ್ಟನ್ನು, ಕುಂಬಳ ಕಾಯಿ ಸಾರು,ಕೊತ್ತೆಕಾಯಿ ಬಸ್ಸಾರನ್ನು,-ರಾಗಿಮುದ್ದೆಯನ್ನು, ರೇಷ್ಮೆ ಸೀರೆ ಹುಟ್ಟ ಮಹಿಳೆಯರನ್ನು, ಕಂಡಾಗ ನೆನೆವುದೆನ್ನಮನಂ ಬನವಾಸಿಯಂ........
ಧರ್ಮಸ್ಥಳ, ಉಡುಪಿ,ಕೊಲ್ಲೂರು, ಕುಕ್ಕೆ, ಹಟ್ಟಿಅಂಗಡಿ,ಕಟೀಲು, ಹೊರನಾಡು ನೆನೆದಾಗ ನೆನೆವುದೆನ್ನಮನಂ ಬನವಾಸಿಯಂ........
ಕುವೆಂಪು,ಕಾರಂತ, ಬೇಂದ್ರೆ,ಗೋಕಾಕ,ಮಾಸ್ತಿ,ರಾಜರತ್ನಂ,ಕಸ್ತೂರಿ,.... ರನ್ನು ನೆನೆದಾಗ ನೆನೆವುದೆನ್ನಮನಂ ಬನವಾಸಿಯಂ........
ಶ್ರೀಗಂಧಮಂ- ಕನಕಾಂಬರ-ಮಲ್ಲಿಗೆಯಂ-ಮಲೆನಾಡ ಪರಿಸರಮಂ-ನೆನೆವುದೆನ್ನಮನಂ ಬನವಾಸಿಯಂ........
0 Responses

Post a Comment

Related Posts Plugin for WordPress, Blogger...